ನೀರಜಾ ಚೌಧರಿ ಭಾರತೀಯ ಪತ್ರಕರ್ತೆ, ಅಂಕಣಗಾರ್ತಿ ಮತ್ತು ರಾಜಕೀಯ ನಿರೂಪಕಿ. ಇವರು ಹತ್ತು ವರ್ಷಗಳ ಕಾಲ ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಜಕೀಯ ಸಂಪಾದಕರಾಗಿದ್ದರು. ಪ್ರಸ್ತುತ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. == ಪ್ರಶಸ್ತಿಗಳು == ೧೯೮೧ ರಲ್ಲಿ ಚೌಧರಿಯವರು ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಗಳಿಗೆಂದೇ ನೀಡುವ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ನಂತರ ೨೦೦೯ ರಲ್ಲಿ ಇವರಿಗೆ ಪ್ರೇಮ್ ಭಾಟಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. == ಪುಸ್ತಕಗಳು == ಹೌ ಪ್ರೈಂ ಮಿನಿಸ್ಟರ್ ಡಿಸೈಡ್ : ರೂಪಾ ಪಬ್ಲಿಕೇಷನ್ಸ್, ೨೦೨೩. == ಉಲ್ಲೇಖಗಳು ==